Thursday 28 January 2010

ನನ್ನಾಸೆಯ ಕನಸುಗಳು




ನಿನ್ನ ಬಿಗಿಯಾಗಿ ಅಪ್ಪಿಕೊಂಡಿರಲು
ಕಿವಿಯಲಿ ಏನೋ ಹೇಳುವ ಆಸೆ

ನೀ ನನ್ನ ಮಡಿಲಲಿ ಮಲಗಿರಲು
ನಿನ್ನ ಹಣೆಗೆ ಮುತ್ತಿಡುವ ಆಸೆ

ನೀ ನನ್ನ ಕರೆದೊಯ್ಯಲು
ನಿನ್ನ ಕೈ ಹಿಡಿದೇ ನಡೆಯುವ ಆಸೆ

ನಿನ್ನ ಕಪ್ಪು ಕಣ್ಣುಗಳಲಿ
ಪ್ರೀತಿಯ ಬೆಳಕು ನೋಡುವ ಆಸೆ

ನಿನ್ನ ವಿಸ್ಮಯ ಲೋಕದಲಿ
ಜೊತೆಗೂಡಿ ಬಾಳುವ ಆಸೆ

ನನ್ನಾಸೆಯ ನುಡಿಯನು ಬದಿಗಿಟ್ಟು ಕೇಳುವೆನು
ಹೇಳು ಗೆಳೆಯ ನಿನ್ನಾಸೆಯ ಸಾಲುಗಳನು

ದೇವರೇ ಬೆರಗಾಗಿ ನಿಂತು ನೋಡುವನು
ನಮ್ಮಿಬ್ಬರ ಸಂತೋಷದ ಕ್ಷಣಗಳನು
ಎಲ್ಲ ಕಷ್ಟಗಳಿಗೂ ನಾಂದಿ ಹಾಡುವನು
ಉಳಿಸಲು ನಮ್ಮ ನಗುವನು
ಉಳಿಸಲು ನಮ್ಮ ನಗುವನು

Wednesday 20 January 2010

ನಿನಗಾಗಿ ಕಾದಿರುವೆ....


ನಿನಗಾಗಿ ಕಾದಿರುವೆ....

ಹೃದಯದಲಿ ಮಣ್ಣಾಗಿವೆ ಮಧುರ ಭಾವಗಳು
ಹೇಗೆ ತೋಡಲಿ ಗೆಳೆಯ ,

ಮೋಡಗಳಿವೆ ಆಗಸದಿ
ಹನಿಗಾಗಿ ಕಾದಿರುವೆ ,

ಕೊಲ್ಮಿಂಚಿದೆ ಬಾನಿನಲಿ
ಬೆಳಕಿಗಾಗಿ ಕಾದಿರುವೆ ,

ಮುಳುಗುತಿಹೆ ನೀರಿನಲಿ
ಆಸರೆಗಾಗಿ ಕಾದಿರುವೆ,

ನಿನ್ನೇ ಕಂಡೆ ಪ್ರತಿ ಕನಸಿನಲಿ
ನಿನಗಾಗಿ ಕಾದಿರುವೆ ,

ಎಂದೆಂದಿಗೂ ಬಯಸೆನು ನಿನ್ನಿಂದ ಪ್ರೀತಿಯನು
ಯಾಕೆಂದರೆ ಗೆಳೆಯ
ನೀನಾರಿಗೋ ಕಾದಿರುವೆ .............
ನೀನಾರಿಗೋ ಕಾದಿರುವೆ .............

Thursday 14 January 2010



ಕ್ಷೆಮಿಸಿಬಿಡು ನನ್ನ
ಮರೆಯಲಾಗದು ನಿನ್ನ

ನಿನ್ನ ಮುದ್ದು ಮುಖ ಅರಳುತ್ತಿತ್ತು
ಹೇಳಿದಾಗಲೆಲ್ಲ ಸಣ್ಣ ಅಚ್ಚರಿಗಳನು

ಕೆಂಡದಂತಹ ಕೋಪ ನಾಚಿ ನೀರಾಗುತ್ತಿತ್ತು
ಕಂಡಾಗ ನಿನ್ನ ತುಂಟ ನಗುವನು

ಮಧ್ಯ ರಾತ್ರಿಯೂ ಮನಸು ಕಾಯುತ್ತಿತ್ತು
ಓದಲು ನಿನ್ನ ಸಿಹಿ ಸಂದೇಶವನು

ನಿನ್ನ ಬೆಳಕಿನ ಬಿಂಬವೇ ಮೂಡುತ್ತಿತ್ತು
ನೋಡಿದಾಗಲೆಲ್ಲ ಪ್ರತಿ ಕನ್ನಡಿಯನು
ನನ್ನ ಹಿಂದೆ ಬಂದು ನಿಂತಂತೆ
ನನ್ನ ಜೊತೆಗೆ ನೀನಿರುವಂತೆ

ಹೇಗೆ ಮರೆಯಲಿ ಆ ಮುದ್ದು ಮುಖವ
ಹೇಗೆ ಮರೆಯಲಿ ಆ ತುಂಟ ನಗುವ
ಹೇಗೆ ಮರೆಯಲಿ ಸಿಹಿ ಸಂದೇಶವ

ಕ್ಷೆಮಿಸಿಬಿಡು ನನ್ನ
ಮರೆಯಲಾಗದು ನಿನ್ನ

ಮರೆಯಲಾರೆನು ನಿನ್ನ




Wednesday 13 January 2010

Friday 8 January 2010

ಅಗಲದಿರು ನನ್ನ

ಭ್ರಾಂತ ಮನದ ಉಯ್ಯಾಲೆ
ಜೀಕದಿರು ಎಂದೆಂದು
ಕ್ಷುದ್ರ ಕನಸಿನ ಗೊಂಚಲೆ
ಉಳಿಯಿತು ಬದುಕಿಗಿಂದು

ಬಲುದೂರ ಹೋದೆ ಅವನಿಂದ
ಮಧುರ ಕ್ಷಣಗಳು ಕೊಲ್ಲುತಿವೆ ಮನದಾಳದಿಂದ
ಕ್ಷೆಮಿಸಿ ಒಂದೇಬಾರಿ ಹಿಂತಿರುಗಿ ನೋಡೆಂದ
ಒಪ್ಪದೆ ಬಂದೆ ಅವನ ಮರೆವ ಛಲದಿಂದ

ಎದೆಯ ಕೆಣಕಿದವು ಹಳೆಯ ನೆನಪುಗಳು
ಎಲ್ಲೆಲ್ಲು ಅವನನ್ನೆ ಹುಡುಕಿತು ಕಂಗಳು
ಎಂದೋ ಬತ್ತಿತ್ತು ಹೃದಯ ಸಮುದ್ರದ ಮರಳು
ಮರೆತರೂ ಬಿಡದ ಕುಡಿನೋಟದ ಸುಳಿಗಳು

ಸಾಕೆನಿಸಿದೆ ಒಂಟಿತನದ ರಸಹುಳಿ
ಬೇಕೆನಿಸಿದೆ ತುಂಟತನದ ಕಚಗುಳಿ

ನಸುನಗುತ ಹೋಗುತ್ತಿದ್ದೆ ಕರೆದರೆ ನನ್ನ
ಅವನು ತಡೆಯಲಿಲ್ಲ ನಾ ಬರುವ ಮುನ್ನ